ಓ - ಯೋಮೈ ತತ್ತ್ವ: ಅಂತರಾತ್ಮ ಭಾವನೆಗೆ, ನೇರ ಅಪರೋಕ್ಷಾನುಭವಕ್ಕೆ ಪ್ರಾಧಾನ್ಯವಿರುವ ಒಂದು ತತ್ತ್ವಪಂಥ ಸು. 17ನೆಯ ಶತಮಾನದಿಂದ ಜಪಾನಿನಲ್ಲಿ ಬಳಕೆಯಲ್ಲಿದೆ. ಅಕಲುಷಿತವಾದ ಆದಿ ಅಂತರಾತ್ಮನೇ ವಿಶ್ವದ ಆತ್ಮ. ಅದು ಮಾನವರಲ್ಲಿ ಪ್ರತಿಫಲಿಸಿದಾಗ ಕಲುಷಿತವಾಗುತ್ತದೆ. ಕಲುಷಿತವಾದ ಅಂತರಾತ್ಮವನ್ನು ಕಲ್ಮಶದಿಂದ ಪ್ರತ್ಯೇಕಿಸಿ ಅದರ ಮೂಲರೂಪವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಈ ಸಾಕ್ಷಾತ್ಕಾರದ ಅನುಭವವೇ ನೇರವಾದ ಅಕಲುಷಿತವಾದ ಅಪರೋಕ್ಷಾನುಭವ. ಇದು ಈ ತತ್ತ್ವಪಂಥದ ತಿರುಳು.
ಈ ಪಂಥದ ಪ್ರವರ್ತಕ ಚೀನೀ ತಾತ್ತ್ವಿಕ ವಾಂಗ್ ಯಂಗ್ ವಿಂಗ್ 1473-1529 ಬೌದ್ಧಿಕ ತತ್ತ್ವವಾದಿಗಳಲ್ಲದ ಜಪಾನೀಯರಿಗೆ ಅಪರೋಕ್ಷಾನುಭವವನ್ನು ಪ್ರತಿಪಾದಿಸಿದ ಈತ ತುಂಬ ಮೆಚ್ಚಿಗೆಯವನಾದನಲ್ಲದೆ ಟೊಕುಗಾವ ಅವಧಿಯಲ್ಲಿ 1615-1867 ಈ ಪಂಥವನ್ನವರು ತಮ್ಮಲ್ಲಿ ಪ್ರಚುರಗೊಳಿಸಿದರು.	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ